ದೀಪಾವಳಿ ಮತ್ತು ಅಕ್ಕ ರಸಮಂಜರಿ-೨೦೦೭
"ಅನಾಥ ಮಕ್ಕಳಿಗೆ ಅಕ್ಕಳ ಆಶ್ರಯ" ಎಂಬ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದ ಅನಾಥಾಲಯಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಅಕ್ಕ ಸಂಸ್ಥೆಯವರು ಅಮೇರಿಕಾದ ಹಲವಾರು ಕನ್ನಡ ಕೂಟಗಳ ಸಹಭಾಗಿತ್ವದಲ್ಲಿ ರಸಮಂಜರಿ-೨೦೦೭ ಹೊಮ್ಮಿ ಕೊಂಡಿದ್ದರು. ಈ ಸಂದರ್ಭದಲ್ಲಿ ಸಿಯಾಟ್ಲ್ ಪ್ರಾಂತ್ಯದಲ್ಲಿ ನವಂಬರ್ ೩ರಂದು ಸಹ್ಯಾದ್ರಿ ಕನ್ನಡದ ಸಂಘದ ಆಶ್ರಯದಲ್ಲಿ ರಸಮಂಜರಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು. ಜನಪ್ರಿಯ ಕಲಾವಿದರಾದ ಡಾ. ಶಮಿತಾ ಮಲ್‍ನಾಡ್, ರಿಚರ್ಡ್ ಲೂಯಿಸ್, ಮೈಸೂರ್ ಆನಂದ್, ಸುನಿಲ್ ರಾವ್ ಹಾಗೂ ಎಲ್.ಎನ್. ಶಾಸ್ತ್ರಿಯವರು ನೆರೆದ ಪ್ರೇಕ್ಷಕರನ್ನು ಮೂರು ಘಂಟೆಗಳಿಗೂ ಮಿಕ್ಕಿ ಮನರಂಜಿಸಿದರು.

ಎಲ್.ಎನ್.ಶಾಸ್ತ್ರಿ ಮತ್ತು ಸುನಿಲ್ ರಾವ್
ಸಿನೆಮಾ ನಟ ಸುನಿಲ್ ರಾವ್ "ಗಂಧದ ಗುಡಿ" ಹಾಡಿನಿಂದ ತಾವು ಉತ್ತಮ ಗಾಯಕರು ಎಂದು ಕೂಡಾ ಮನದಟ್ಟು ಮಾಡಿದರು. ಡಾ. ರಾಜ್ ಅವರ "ಹುಟ್ಟಿದರೆ ಕನ್ನಡನಾಡಿನಲ್ಲಿ" ಹಾಡನ್ನು ಎಲ್.ಎನ್.ಶಾಸ್ತ್ರಿಯವರ ಜತೆ ಹಾಡಿ, ಮುಂಗಾರು ಮಳೆಯ "ಅನಿಸುತಿದೆ ಏಕೋ" ಹಾಡಿನಿಂದ ಮುಕ್ತಾಯ ಮಾಡಿದರು.
ಹೆಚ್ಚಿನ ಹಾಡುಗಳು ನೆರೆದವರ ಕೋರಿಕೆ ಮೇಲೆ ಹಾಡಲ್ಪಟ್ಟವು. ಸಿಯಾಟಲ್‍ನ ಶರದ್ ಋತುವಿನ ಹಿತವಾದ ಸಂಜೆಯಲ್ಲಿ ಈ ಗಾಯಕಿ-ಗಾಯಕರು ಹಾಡಿದ ಹಾಡುಗಳು ದೇಶ, ಕಾಲದ ಮೇರೆ ಮೀರಿ ಗಂಧರ್ವಗಾನವಾಗಿ ಮಾರ್ಪಟ್ಟವು.

ಮೈಸೂರು ಆನಂದ್